Index   ವಚನ - 1100    Search  
 
ಅರಿಯದೆ ಆಗಿ ಬಂದವರೆನಲಾಗದು, ಆದವರಿಗೆ ಮನಬಾಧೆಯುಂಟೆ? ಅದೇಕೆಂದಡೆ, ಶರಣುಹಾಕಿ ಬಂದಲ್ಲಿ ನಿರ್ಮಳ ಮಾತನಾಡುವರು. ಹಾಕದೆ ಬಂದು ಮಾತನಿಟ್ಟರೆ ಪೂರ್ವದ ಹಗೆಭಾವದುಲುವ ತೋರುವರು. ಕೊಡಲಿಲ್ಲ ಕೊಳ್ಳಲಿಲ್ಲ ತುಡುಗುಣಿತನದ ಬಡಿವಾರವ ನೋಡಾ. ಇಂತಲ್ಲ ಶರಣ, ಲೋಕರವಿಯಂತಿಪ್ಪ ಗುರುನಿರಂಜನ ಚನ್ನಬಸವಲಿಂಗಾ ನೀ ಸನ್ನಿಹಿತ.