ರಾಜಯೋಗಿ ಶಿವಯೋಗಿಗಳೆಂದು ಹೆಸರಿಟ್ಟು ನುಡಿವರು.
ಆ ಭಾವವನರಿಯದ ಉಪಭ್ರಾಂತರುಗಳ ಮಾತು ಸೊಗಸದಯ್ಯಾ.
ಪುಚ್ಚಗುಂಡಾಟದ ಬಾಲರಂತಿರಲಿ,
ಅನಬಹುದು ಸರ್ವಾಚಾರಸಂಪತ್ತಿನ
ಲೋಲರಿಗೆ ರಾಜಯೋಗಿಗಳೆಂದು.
ಅನಬಹುದು ಪರಿಪೂರ್ಣಜ್ಞಾನಾನಂದ ಸುಖಮುಖಲೋಲರಿಗೆ
ಶಿವಯೋಗಿಗಳೆಂದು.
ಈ ದ್ವಂದ್ವೈಶ್ವರ್ಯ ಕಾಣಿಸಿಕೊಳ್ಳದೆ ಮುಂದೇನರಿಯದ
ಮಂದಮತಿಗಳ ಹಿಡಿದು ತಂದು
ಕರ್ಮಕಟ್ಟಳೆಯಿಂದೆ ಕೂಡಿಸಿಕೊಂಡು ತಮ್ಮ ಅಹಂಭಾವನಿಮಿತ್ಯಕ್ಕೆ
ಪರಮವಿರಾಗತಿಗಳೆಂದು ಹೇಳಿಸಿಕೊಂಬ ಕಣ್ಮನಭಾವದ ಕಲ್ಮಷವ ನೋಡಾ.
ಹುಸಿಯಿಂದೆ ಹೊಡದಾಡಿ ಮಠ ಕ್ಷೇತ್ರವೆಂದು ಆಮಿಷ ಮೋಹದಲ್ಲಿ ಮುಳುಗಿ
ಪೂರ್ವಪಕ್ಷಾಳಿಯ ಸಂಸಾರದುರ್ನಡತೆಯೊಳ್ನಿಂದು ಮೆರೆವ
ಮಲತ್ರಯರತಿ ಮೆಚ್ಚಿರುವವರಿಗೆ ರಾಜಯೋಗಿಗಳೆನ್ನಬಹುದೆ?
ಜಿಹ್ವೋಚ್ಫಿಷ್ಟ, ಪ್ರಾಣಿಗಳಿರಾ! ಕ್ರುದ್ಧಮೃಗದಂತೆ ತಿರುತಿರುಗಿ ಬಳಲಿ
ಒಂದು ಸ್ಥಾನವಿಡಿದು ಪೂರ್ವದ ದುಸ್ಸಾರರತಿಯ ನೆನವಿನೊಳಿಟ್ಟು
ವೇಷಜಾಣಿಕೆಯನರಿದು ಕಂಡು ಕಂಡು ಸೋಗು ತಾಳುವ
ಕೀಳುಜಾತಿ ಕಿಲ್ಬಿಷಭರಿತರಿಗೆ ಶಿವಯೋಗಿಗಳೆನ್ನಬಹುದೆ?
ತನು ಮನ ಭಾವೋಚ್ಛಷ ಪ್ರಾಣಿಗಳಿರಾ, ಇದು ಕಾರಣ,
ಆಟದವರು, ನೋಟದವರು,
ಕೂಟದವರು ಕೂಡಿಯೈದುವರು ಸಂಘಾತವನು.
ಮತ್ತೆ ಗುರುನಿರಂಜನ ಚನ್ನಬಸವಲಿಂಗಸನ್ನಿಹಿತ ಶರಣರೆ
ರಾಜಯೋಗಿ ಶಿವಯೋಗಿಗಳಲ್ಲದೆ
ಮಿಕ್ಕ ಭವಭಾರಿಗಳ ತರಲಾಗದು ಘನದ ಮುಂದೆ.
Art
Manuscript
Music
Courtesy:
Transliteration
Rājayōgi śivayōgigaḷendu hesariṭṭu nuḍivaru.
Ā bhāvavanariyada upabhrāntarugaḷa mātu sogasadayyā.
Puccaguṇḍāṭada bālarantirali,
anabahudu sarvācārasampattina
lōlarige rājayōgigaḷendu.
Anabahudu paripūrṇajñānānanda sukhamukhalōlarige
śivayōgigaḷendu.
Ī dvandvaiśvarya kāṇisikoḷḷade mundēnariyada
mandamatigaḷa hiḍidu tandu
karmakaṭṭaḷeyinde kūḍisikoṇḍu tam'ma ahambhāvanimityakke
paramavirāgatigaḷendu hēḷisikomba kaṇmanabhāvada kalmaṣava nōḍā. Husiyinde hoḍadāḍi maṭha kṣētravendu āmiṣa mōhadalli muḷugi
pūrvapakṣāḷiya sansāradurnaḍateyoḷnindu mereva
malatrayarati mecciruvavarige rājayōgigaḷennabahude?
Jihvōcphiṣṭa, prāṇigaḷirā! Krud'dhamr̥gadante tirutirugi baḷali
ondu sthānaviḍidu pūrvada dus'sāraratiya nenavinoḷiṭṭu
vēṣajāṇikeyanaridu kaṇḍu kaṇḍu sōgu tāḷuva
kīḷujāti kilbiṣabharitarige śivayōgigaḷennabahude? Āṭadavaru, nōṭadavaru,
kūṭadavaru kūḍiyaiduvaru saṅghātavanu.
Matte guruniran̄jana cannabasavaliṅgasannihita śaraṇare
rājayōgi śivayōgigaḷallade
mikka bhavabhārigaḷa taralāgadu ghanada munde.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು