Index   ವಚನ - 1118    Search  
 
ಒಡಲಿಚ್ಫೆಗೆ ಉಪಾಧಿವಿಡಿದು ಅನುಸರಣೆಯಿಂದೆ ಅಳಿಕಿ ನಡೆವುದು ಮಾಯಾಮೋಹಿತರಿಗಲ್ಲದೆ ನಿಸ್ಸೀಮ ನಿರೂಪಾಧಿ ನಿಜಜಂಗಮಕ್ಕೆಲ್ಲಿಹದೊ? ತನುವಿನ ರತಿಯ ಮನದ ಮೋಹ ಪ್ರಾಣನ ಗತಿ ರಮ್ಯ ಗಂಜಳ ಗಲಭೆಗಳಿಗಲ್ಲದೆ ತನುಶಕ್ತಿ ಪ್ರಾಣಮುಕ್ತಿ ಮನಯುಕ್ತಿಯುತ ಮಹಿಮರಿಗೆಲ್ಲಿಹದೊ! ಇಹಪರದಲ್ಲಿರ್ದು ಇಹಪರವರಿಯದ ಇಹಪರಗತಿಮತಿಯಿಂದೆ, ನಿರ್ಗಮನವೇದಿ ನಿಶ್ಚಿಂತನಿವಾಸನಿಲುವೆ ಶರಣ ಕಾಣಾ ಗುರುನಿರಂಜನ ಚನ್ನಬಸವಲಿಂಗ.