Index   ವಚನ - 1124    Search  
 
ತಾನಿಲ್ಲದ ತವನಿಧಿಯ ತೆರನ ನೋಡಾ, ನೀನೆನ್ನದ ನಿಲವು ಘನವನೊಳಕೊಂಡು ತವನಿಧಿಯ ತಲೆಯಲಿಟ್ಟು ಶಿವನೆಂಬ ಸುಳುಹಳಿದ ನಿಲುವೇ ನಿತ್ಯತ್ವರೂಪವದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.