Index   ವಚನ - 1125    Search  
 
ಹುಟ್ಟಿ ಬಂದು ಹುಟ್ಟಿದವಂಗೆ ಭಾವಿತತ್ರಯ, ಸಾಕಾರಜನಿತಂಗೆ ಸರ್ವವು ಸಮ್ಮುಖ, ಸರ್ವವು ಸ್ನೇಹಸಮವಾದಲ್ಲಿ ಉಭಯ ನಷ್ಟದುಳುಮೆ. ಆ ಉಳುಮೆ ತಾನಾದಲ್ಲಿ ಗುರುನಿರಂಜನ ಚನ್ನಬಸವಲಿಂಗವು ಬೇರಿಲ್ಲ.