ಲಿಂಗವೆಂಬ ಭಾವವಂಗದಲ್ಲರತು,
ಅಂಗವೆಂಬ ಭಾವ ಲಿಂಗದಲ್ಲರತು,
ಲಿಂಗ ಅಂಗವೆಂಬ ಭಾವ ನಿಜದಲ್ಲರತು,
ನಿರ್ವಾಣಪದದಲ್ಲಿ ನಿವಾಸವಾದ ನಿರ್ಭೇದ್ಯಂಗೆ,
ನಡೆದುದೇ ಸತ್ಕ್ರಿಯೆ, ನುಡಿದುದೇ ಶಿವಾನುಭಾವ,
ಹಿಡಿದುದೇ ಮಹಾಜ್ಞಾನ.
ಗುರುನಿರಂಜನ ಚನ್ನಬಸವಲಿಂಗಾ,
ನಿಮ್ಮ ಶರಣ ಅಪೂರ್ವಚರಿತನು.
Art
Manuscript
Music
Courtesy:
Transliteration
Liṅgavemba bhāvavaṅgadallaratu,
aṅgavemba bhāva liṅgadallaratu,
liṅga aṅgavemba bhāva nijadallaratu,
nirvāṇapadadalli nivāsavāda nirbhēdyaṅge,
naḍedudē satkriye, nuḍidudē śivānubhāva,
hiḍidudē mahājñāna.
Guruniran̄jana cannabasavaliṅgā,
nim'ma śaraṇa apūrvacaritanu.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು