Index   ವಚನ - 1140    Search  
 
ಭುವನ ಬ್ರಹ್ಮಾಂಡ ಸಚರಾಚರ ಸಗುಣ ನಿರ್ಗುಣ ಸಕಲ ಸಂಪತ್ತೆಲ್ಲ ಜಲಪ್ರಳಯಗೊಂಡಿತ್ತು ನೋಡಾ. ಆ ಜಲ ಪಾವಕಂಗಾಹುತಿಯಾಯಿತ್ತು. ಆ ಪಾವಕನ ಪ್ರಭಾಮಂಡಲದಲ್ಲಿ ಪರಿಪೂರ್ಣತ್ವಾನಂದ ಪ್ರಕಾಶವೆರೆದು ಆಯತ ಸ್ವಾಯತ ಸನ್ನಿಹಿತ ಸಮಾಧಾನವಾಗಿ ನಿಂದ ನಿಲವರಿಯದೈಕ್ಯಪದ ನಿಜವಾಯಿತ್ತು ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣಂಗೆ.