Index   ವಚನ - 1141    Search  
 
ಪರುಷದ ಹೊರೆಯಲಿರ್ದ ಕಬ್ಬುನ ನಾಮರೂಪು ನಷ್ಟವಾಗಿರ್ದಂತಾದುದು ನೋಡಾ ಎನ್ನ ಕಾಯವು. ಕುಂಡಲಿಯನರಿದ ಕೀಟ ತನ್ನನರಿಯದಂತಾದುದು ನೋಡಾ ಎನ್ನ ಮನವು. ಅನಲನಾವರಿಸಿದ ರಸವರತ ಪರ್ಣದ ಪರಿಯಂತಾದುದು ನೋಡಾ ಎನ್ನ ಭಾವವು. ಇದು ಕಾರಣ ಹುಟ್ಟಿಹೊಂದದ ಘನಸಾರದಂತಿರ್ದ ಉರಿಯೊಲ್ಲಭನ ನೆರೆದಂತಾದುದು ನೋಡಾ ಎನ್ನಾತ್ಮನು ಗುರುನಿರಂಜನ ಚನ್ನಬಸವಲಿಂಗಾ ನಿಮ್ಮೊಳಗೆ.