Index   ವಚನ - 1150    Search  
 
ಸತ್ತ ಹೆಣಗಳ ಬಾಯಲ್ಲಿ ಮಿಥ್ಯಗಳ್ಳರುಲುಹುವಿದೇನೊ! ಉಲುಹಿಂಗೆ ಒಲಿದುಬಂದ ವಾಸನೆಯ ಬೆಳೆಯ ನೋಡಾ. ಬೆಳೆಯ ಬುಡದಲ್ಲಿ ತಲೆಯೆದ್ದು ನೋಡಲು ಹಲವುಪರಿ ಜನರು ಬೆದರಿ ಕಣ್ಣಬಿಟ್ಟು ನೋಡಿ ತಲೆಯ ಹಿಡಿದು ನೆಲೆ ನೆಲೆಯ ದಾಂಟಿ ನಿಲುವೆಂದಲ್ಲಿ ಚಲುವಾಯಿತ್ತು ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣಂಗೆ.