Index   ವಚನ - 1151    Search  
 
ನೀರೊಳಗೆ ನೀರು ಹುಟ್ಟಿತೇನು? ಆರಾರ ಮೇಲಿಂದೆನ್ನರಸಿಕೊಂಡು ಬಂದಿತೇನು? ಆರನಾರಿಂಗೆ ತಂದಿತೇನು? ಆರ ಸುಖವಾರಿಂಗೆ ತೋರಿಕೊಂಡಿತೇನು? ಆರ ಕೈಯಿಂದ ಮರೆಮರೆಯಾಗುತ ತೋರಿತ್ತದೇನು? ಗುರುನಿರಂಜನ ಚನ್ನಬಸವಲಿಂಗ ಮತ್ತೇನು?