Index   ವಚನ - 1175    Search  
 
ಯೋನಿಯಲ್ಲಿ ಜನಿಸಿದ ಭಾವ ಸಂಸಾರದಲ್ಲಿ ತೊಳಲುವುದೇ ಸಾಕ್ಷಿ. ಸಂಸಾರದಲ್ಲಿ ತೊಳಲುವ ಭಾವ ಮುಂದೆ ಮರಣಬಾಧೆಯಲ್ಲಿ ಮುಳುಗುವುದೇ ಸಾಕ್ಷಿ. ಅದಲ್ಲದೆ ಗುರುವಿನಲ್ಲಿ ಜನಿಸಿದ ಭಾವ ಸರ್ವಾಚಾರ ಸಂಪತ್ತಿನೊಳಗೆ ಭೋಗೋಪಭೋಗಿಯಾಗಿಹುದೇ ಸಾಕ್ಷಿ. ಸರ್ವಾಚಾರಸಂಪತ್ತಿನೊಳಗೆ ಭೋಗೋಪಭೋಗಿಯಾಗಿರ್ದ ಭಾವ ಮಹಾಲಿಂಗೈಕ್ಯಪದಲೋಲವಾದುದೇ ಸಾಕ್ಷಿ. ಇದು ಕಾರಣ ಆ ಭಾವಕ್ಕೆ ಸಂದುಸಂಶಯದ ಗೊಂದಣವುಂಟಲ್ಲದೆ ಈ ಭಾವಕ್ಕೆ ಸಂದುಸಂಶಯದ ಗೊಂದಣವುಂಟೆ? ಇದೇ ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣಸದ್ಭಾವ.