ವಚನ - 1347     
 
ಪ್ರಣಮವನುಚ್ಚರಿಸುವ ಪ್ರಮಾಣಿಕರೆಲ್ಲರು, ಪ್ರಣಮಮಂತ್ರದರ್ಥವ ತಿಳಿದು ನೋಡಿರೆ. ಪ್ರಣಮ `ನಾಹಂ' ಎಂದುದೆ? ಪ್ರಣಮ `ಕೋಹಂ' ಎಂದುದೆ? ಪ್ರಣಮ `ಸೋಹಂ' ಎಂದುದೆ? ಪ್ರಣಮ `ಚಿದಹಂ' ಎಂದುದೆ?-ಎನ್ನದಾಗಿ, ಪ್ರಣಮ `ಭರ್ಗೋದೇವಸ್ಯ ಧೀಮಹಿ' ಎಂದುದು. ``ಸವಿತುಃ ಪದಮಂಗಃ ಸ್ಯಾತ್ ಭರ್ಗಸ್ತು ಲಿಂಗಮೇವ ಚ | ಧೀಮಹಿ ಪದಮಿತ್ಯೇಷಾಂ ಗಾಯತ್ರ್ಯಾಂ ಲಿಂಗಸಂಬಂಧಃ'' -ಎಂದುದಾಗಿ ಪ್ರಣಮದರ್ಥ ತಾನೆ ನಿಮ್ಮ ಮಯವು ಗುಹೇಶ್ವರಾ.