ಪ್ರಥಮದಲ್ಲಿ ವಸ್ತು ಏನೂ ಏನೂ ಇಲ್ಲದ
ಮಹಾಘನಶೂನ್ಯಬ್ರಹ್ಮವಾಗಿದ್ದಿತ್ತು.
ಅಂತಿರ್ದ ಪರವಸ್ತು ತಾನೆ, ತನ್ನ ಲೀಲೆಯಿಂದ,
ತನ್ನ ದಿವ್ಯಾನಂದ ಸ್ವಲೀಲಾ ಸ್ವಭಾವದಿಂದಾದುದು
ಆತ್ಮನೆಂಬಂಗಸ್ಥಲ.
ಅಂತಾದ ಜೀವಾತ್ಮನೆಂಬ ಅಂಗಸ್ಥಲಕ್ಕೆ
ಸೇರಿದ ತತ್ತ್ವಂಗಳಿಪ್ಪತ್ತೈದು.
ಅವಾವುವಯ್ಯಾ ಎಂದಡೆ:
ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು,
ವಾಗಾದಿ ಕರ್ಮೇಂದ್ರಿಯಂಗಳೈದು,
ಶಬ್ದಾದಿ ವಿಷಯಂಗಳೈದು,
ಪ್ರಾಣಾದಿ ಪ್ರಾಣಾದಿ ವಾಯುಗಳೈದು,
ಮನ ಬುದ್ಧಿ ಚಿತ್ತ ಅಹಂಕಾರ ಜೀವಂಗಳೈದು-
ಅಂತು ಅಂಗ ತತ್ತ್ವಂಗಳಿಪ್ಪತ್ತೈದು.
ಇಂತು ಅಂಗತತ್ತ್ವ ಇಪ್ಪತ್ತೈದು ತನ್ನೊಳಗೆ
ಸಮರಸತ್ವನೆಯ್ದಿಸಲೋಸುಗ,
ಭಕ್ತಿ ತದರ್ಥವಾಗಿ,
ಆ ಮಹಾಘನ ಪರಾತ್ಪರವಪ್ಪ ದಿವ್ಯಲಿಂಗವು
ಹನ್ನೊಂದು ತತ್ತ್ವವಾಯಿತ್ತು.
ಇಂತೀ ಹನ್ನೊಂದು ತತ್ತ್ವದ ಪರಿಕ್ರಮವೆಂತೆಂದೊಡೆ:
ಶಾಂತ್ಯಾದಿ ಶಕ್ತಿಗಳೈದು,
ಶಿವಾದಿ ಸಾದಾಖ್ಯಗಳೈದು, ಪರಶಿವತತ್ತ್ವವೊಂದು.-
ಇಂತೀ ಲಿಂಗತತ್ತ್ವ ಹನ್ನೊಂದು.
ಆ ಅಂಗತತ್ತ್ವ ಲಿಂಗತತ್ತ್ವವೆಂಬ
ಉಭಯತತ್ತ್ವ ಮೂವತ್ತಾರು.
ಇಂತಿವರ ಸಮರಸೈಕ್ಯವೆಂತುಂಟಯ್ಯಾ ಎಂದಡೆ:
ನಿವೃತ್ತಿಶಕ್ತಿಯನೈದಿ,
ವಾಗಾದಿ ಕರ್ಮೇಂದ್ರಿಯಂಗಳೈದು
ಕರ್ಮ ಸಾದಾಖ್ಯವನೊಡಗೂಡಿದಲ್ಲಿ,
ಪೃಥ್ವಿ ತತ್ತ್ವ ಬಯಲಾಯಿತ್ತು.
ಪ್ರತಿಷ್ಠಾಶಕ್ತಿಯನೈದಿ, ಶಬ್ದಾದಿ ವಿಷಯಂಗಳೈದು
ಕರ್ತುಸಾದಾಖ್ಯವನೊಡಗೂಡಿದಲ್ಲಿ,
ಅಪ್ಪು ತತ್ತ್ವ ಬಯಲಾಯಿತ್ತು.
ವಿದ್ಯಾಶಕ್ತಿಯನೈದಿ, ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು
ಮೂರ್ತಿ ಸಾದಾಖ್ಯವನೊಡಗೂಡಿದಲ್ಲಿ,
ತೇಜತತ್ತ್ವ ಬಯಲಾಯಿತ್ತು.
ಶಾಂತಿಶಕ್ತಿಯನೈದಿ, ಪ್ರಾಣಾದಿವಾಯುಗಳೈದು
ಅಮೂರ್ತಿಸಾದಾಖ್ಯವನೊಡಗೂಡಿದಲ್ಲಿ,
ವಾಯುತತ್ತ್ವ ಬಯಲಾಯಿತ್ತು.
ಶಾಂತ್ಯತೀತ ಶಕ್ತಿಯನೈಯ್ದಿ,
ಮನ ಬುದ್ಧಿ ಚಿತ್ತ ಅಹಂಕಾರ ಜೀವಂಗಳೈದು
ಶಿವಸಾದಾಖ್ಯವನೊಡಗೂಡಿದಲ್ಲಿ,
ಆಕಾಶತತ್ತ್ವ ಬಯಲಾಯಿತ್ತು.
ಇಂತೀ ಪಂಚವಿಂಶತಿತತ್ತ್ವಂಗಳು
ಲಿಂಗೈಕ್ಯವಾಗಲೊಡನೆ,
ಲಿಂಗತತ್ತ್ವ ಹನ್ನೊಂದು ತಾವು
ಒಂದೊಂದನೊಡಗೂಡಿ ಏಕಾರ್ಥವಾದಲ್ಲಿ,
ಕುಳಸ್ಥಲವಡಗಿತ್ತು.
ಇಂತು ಕುಳಸ್ಥಲ-ಸ್ಥಲಕುಳವಡಗಲೊಡನೆ,
ಮಹಾಘನ ಪರಾತ್ಪರವಪ್ಪ ದಿವ್ಯಲಿಂಗವು,
ವಾರಿಕಲ್ಲು ಕರಗಿ ನೀರಾದಂತೆ
ತನ್ನ ಪರಮಾನಂದದಿಂದವೆ ಸರ್ವಶೂನ್ಯವಾಯಿತ್ತು. ಅದೆಂತೆನಲು,
ಸಾಕ್ಷಿ: “ಅನಾದಿಸಿದ್ಧಸಂಸಾರಂ ಕರ್ತೃ ಕರ್ಮ ವಿವರ್ಜಯೇತ್|
ಸ್ವಯಂಮೇವ ಭವೇದ್ದೇಹೀ ಸ್ವಯಂಮೇವ ವಿಲೀಯತೇ||
ಅಂತಃ ಶೂನ್ಯಂ ಬಹಿಃ ಶೂನ್ಯಂ ಶೂನ್ಯಶೂನ್ಯಾ ದಿಶೋ ದಶ|
ಸರ್ವಶೂನ್ಯಂ ನಿರಾಕಾರಂ ನಿರ್ದ್ವಂದ್ವಂ ಪರಮಂ ಪದಂ||”
-ಎಂದುದಾಗಿ,
ಇಂತೀ ಅಂಗ ತತ್ವವವಿಪ್ಪತ್ತೈದು ಲಿಂಗತತ್ತ್ವ ಹನ್ನೊಂದು,
ಇಂತೀ ಉಭಯತತ್ತ್ವ ಏಕಾರ್ಥವಾಗಿ,
ಸರ್ವಶೂನ್ಯವನೆಯ್ದಿದ ಪರಿಕ್ರಮದ ನಿರ್ಣಯದ ಬೆಡಗು,
ತತ್ತ್ವಮಸ್ಯಾದಿ ವಾಕ್ಯಾರ್ಥಂಗಳಲ್ಲಿ ಕಾಣಲಾಯಿತ್ತು.-ಅದೆಂತೆಂದಡೆ:
ತತ್ತ್ಪದವೇ ಲಿಂಗ, ತ್ವಂ ಪದವೇ ಅಂಗ,
ಈ ಎರಡರ ಐಕ್ಯವೇ ಅಸಿ ಎಂದುದಾಗಿ.
ಇಂತು ಸಕಲನಾಗಬಲ್ಲ,
ಸಕಲ ನಿಃಕಲನಾಗಬಲ್ಲ,
ಸಕಲ ನಿಃಕಲಾತೀತನಾಗಿ ಏನೂ ಏನೂ ಇಲ್ಲದ
ಮಹಾ ಘನಶೂನ್ಯಬ್ರಹ್ಮವಾಗಿ
ಇರಬಲ್ಲನಯ್ಯಾ ನಮ್ಮ ಗುಹೇಶ್ವರಲಿಂಗವು!
Transliteration Prathamadalli vastu ēnū ēnū illada
mahāghanaśūn'yabrahmavāgiddittu.
Antirda paravastu tāne, tanna līleyinda, tanna divyānanda
svalīlā svabhāvadindādudu ātmanembaṅgasthala.
Antāda jīvātmanemba aṅgasthalakke
sērida tatvaṅgaḷippattaidu.
Avāvuvayyā endaḍe:
Śrōtrādi jñānēndriyaṅgaḷaidu,
vāgādi karmēndriyaṅgaḷaidu,
śabdādi viṣayaṅgaḷaidu,
prāṇādi prànàdi vàyugaḷaidu,
mana bud'dhi citta ahaṅkāra jīvaṅgaḷaidu. -
Antu aṅga tatvaṅgaḷippattaidu.
Intu aṅgatatva ippattaidu tannoḷage samarasatvaneydisalōsuga,
bhakti tadarthavāgi, ā mahāghana parātparavappa divyaliṅgavu
hannondu tatvavāyittu.
Intī hannondu tatvada parikramaventendoḍe:
Śāntyādi śaktigaḷaidu,
śivādi sādākhyagaḷaidu, paraśivatatvavondu. -
Intī liṅgatattva hannondu.
Ā aṅgatattva liṅgatattvavemba ubhayatattva mūvattāru.
Intivara samarasaikyaventuṇṭayyā endaḍe:
Nivr̥ttiśaktiyanaidi, vāgādi karmēndriyaṅgaḷaidu
karma sādākhyavanoḍagūḍidalli,
pr̥thvi tattva bayalāyittu.
Pratiṣā*śaktiyanaidi, śabdādi viṣayaṅgaḷaidu
kartusādākhyavanoḍagūḍidalli,
appu tattva bayalāyittu.
Vidyāśaktiyanaidi, śrōtrādi jñānēndriyaṅgaḷaidu
mūrti sādākhyavanoḍagūḍidalli,
tējatattva bayalāyittu.
Śāntiśaktiyanaidi, prāṇādivāyugaḷaidu
amūrtisādākhyavanoḍagūḍidalli,
vāyutattva bayalāyittu.
Śāntyatīta śaktiyanaiydi,
mana bud'dhi citta ahaṅkāra jīvaṅgaḷaidu
śivasādākhyavanoḍagūḍidalli,
ākāśatattva bayalāyittu.
Intī pan̄cavinśatitattvaṅgaḷu liṅgaikyavāgaloḍane,
liṅgatattva hannondu tāvu ondondanoḍagūḍi ēkārthavādalli,
kuḷasthalavaḍagittu.
Intu kuḷasthala_sthalakuḷavaḍagaloḍane,
mahāghana parātparavappa divyaliṅgavu, vārikallu karagi nīrādante
tanna paramānandadindave sarvaśūn'yavāyittu.
Adentenalu,
sākṣi:
Anādisid'dhasansāraṁ kartr̥ karma vivarjayēt
svayammēva bhavēddēhī svayammēva vilīyatē
antaḥ śūn'yaṁ bahiḥ śūn'yaṁ śūn'yaśūn'yā diśō daśa
sarvaśūn'yaṁ nirākāraṁ nidrvandvaṁ paramaṁ padaṁ
_endudāgi, intī aṅga tatta vavippattaidu liṅgatattva hannondu,
intī ubhayatattva ēkārthavāgi,
sarvaśūn'yavaneydida parikramada nirṇayada beḍagu,
tattvamasyādi vākyārthaṅgaḷalli kāṇalāyittu. -Adentendaḍe:
Tatpadavē liṅga, tvaṁ padavē aṅga,
ī eraḍara aikyavē asi endudāgi.
Intu sakalanāgaballa, sakala niḥkalanāgaballa,
sakala niḥkalātītanāgi ēnū ēnū illada mahā ghanaśūn'yabrahmavāgi
iraballanayyā nam'ma guhēśvaraliṅgavu!
Hindi Translation प्रथम में वस्तु कुछ भी न रही थी।
महाघन शून्य ब्रह्मा बना हुआ था।
वैसी रही पर वस्तु खुद, अपनी लीला सें ,अपना दिव्यानंद
स्वलीला स्वभाव से आत्मा जैसा अंगस्थल।
ऐसी हुई जीवात्मा जैसे अंगस्थल को
मिले पच्चीस तत्व हैं।
वे कौनसे कहें तो-
श्रोत्रादि पाँच ज्ञानेंद्रिय ,
वागादि पाँच कर्मेंद्रिय,
शब्दादि पाँच विषय,
प्राणादि पाँच विषय,
मन बुद्धि चित्त ,अहंकार जीव पाँच
ऐसे अंग तत्व पच्चीस।
ऐसे अंगतत्व पच्चीस अपने में समरसत्व होने के लिए,
भक्ति तदर्थ बनी, उस महाघन परात्पर रहा दिव्यलिंग
ग्यारह तत्व हुए थे ।
ऐसे ग्यारह तत्वों की परिक्रमा कैसे कहें तो
शांत्यादि शक्ति पाँच,
शिवादि सादाख्य पाँच,
परशिव तत्व एक।
ऐसे लिंग तत्व ग्यारह।
वह अंगतत्व लिंग तत्व कहें उभय तत्व छत्तीस।
ऐसे इनका समरसैक्य कैसे हुए हैं कहें तो:
निवृत्ति शक्ति मिलकर, वागादि कर्मेंद्रिय पाँच,
कर्म सदारव्य कुल मिले तो
पृथ्वी तत्व शून्य हुआ था।
प्रतिष्ठा शक्ति मिले, शब्दादि विषय पाँच
कर्तृ सादारव्य मिले हुए तो, जल तत्व शून्य हुआ था।
विद्याशक्ति मिलकर श्रास्त्रादि ज्ञानेंद्रिय पाँच
मूर्ति सादारव्य मिले हुए तो,
तेजतत्व शून्य हुआ था।
शांतिशक्ति मिलाकर प्राणादि वायु पाँच
अमूर्ति सदारव्य मिले हुए तो
वायु तत्व शून्य हुआ था।
शांत्यतीत शक्ति मिलाकर
मन बुद्धि चित्त् अहंकार जीव पाँच
शिवसदारव्य मिले हुए तो
आकाश तत्व शून्य हुआ था।
ऐसे पंचविंशति तत्व लिंगैक्य होते ही,
लिंग तत्व ग्यारह खुद एक एक मिलकर एकार्थ होने में,
कुल स्थल छिपा था।
ऐसे कुलस्थल-स्थलकुल छिपे रहने से,
महाधन परात्पर रहा दिव्य लिंग, ओले पिघले पानी बने जैसे
अपने परमानंद से ही सर्व शून्य हुआ था।
वह कैसे कहे तो--
साक्षी- ‘अनादि सिद्ध संसारं कर्तृकर्म विवर्जयेत्
स्वयंमेव भवेद्देहीस्वयमेव विलीयते।
अतः शून्यं बाहि: शून्यंशून्या शून्या दिशो दश।
सर्वशून्यं निराकांर निर्द्व्ंद्वं परमं पदं’।।।
कहने से ऐसे अंग तत्व पच्चीस लिंग तत्व ग्यारह,
ऐसे उभय तत्व एकार्थ बने,
सर्वशून्य से मिलकर परिक्रम के निर्णय की सुंदरता,
तत्व मस्यादि वाक्यार्थों में दिखाई पड़ी थी।
वह कैसे कहें तो:
तत्व पद ही लिंग, त्वं पद ही अंग,
इन दोनों के ऐक्य ही असि कहने से
ऐसी सकल होनेवाला, सकल नि:कल होनेवाला,
सकल नि:कलातीत होकर कुछ कुछ भी नहीं रहा
महाघन शून्य ब्रह्म बने
रह सकता है हमारा गुहेश्वरा लिंग।
Translated by: Eswara Sharma M and Govindarao B N