Index   ವಚನ - 1177    Search  
 
ಗುರುಕರಜಾತನಾದ ಸಗುಣಾನಂದ ಸಂಪನ್ನನು ಬಿಡಬೇಕು ಕಾಣಾ ತನುತ್ರಯದಾಸೆಯನು, ಭಕ್ತಿಕ್ರಿಯಾ ವಿಶ್ವಾಸವನು. ಶಿವಲಿಂಗನಿಷ್ಠೆ ನಿರ್ಗುಣಾನಂದೈಶ್ವರ್ಯವುಳ್ಳಾತನು ಬಿಡಬೇಕು ಕಾಣಾ ಮಲತ್ರಯದಾಸೆಯನು, ಲಿಂಗಸುಖರತಿ ಮೋಹವನು. ಜಂಗಮದಾಸೋಹಸುಖಮಯನು ಬೀಡಬೇಕು ಕಾಣಾ ಜೀವತ್ರಯದಾಸೆಯನು, ತ್ರಿವಿಧ ಪ್ರಸಾದಸಾರವನು. ಇದು ಕಾರಣ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಲ್ಲಿ ಇವು ತಪ್ಪಿದರೆ ಮುಂದೆ ನರಕ ತಪ್ಪದು ಕಾಣಾ.