ಶರಣ ತಾ ತನ್ನ ವಿನೋದಕ್ಕೆ ಕುರುಹಿಟ್ಟು ರಚಿಸಿದಲ್ಲಿ
ಆ ಶರಣನ ಇಚ್ಫಾಮಾತ್ರದಲ್ಲಿ ತನುಮನಪ್ರಾಣಭಾವ
ಜ್ಞಾನಾತ್ಮಂಗಳಿರುತ್ತಿಹವು.
ಅದು ಕಾರಣ ಗುರುಜಾತ ಶರಣರೆಂದು ಲಾಂಛನಧಾರಿಯಾದ ಮೇಲೆ
ಮತ್ತೆ ನಮಗೆ ತನುಭಾವವೆನಲು ಅಂತೆಯಾಗಿಪ್ಪುದು
ಮನಭಾವವೆನಲು ಅಂತೆಯಾಗಿಪ್ಪುದು
ಪ್ರಾಣನ ಪ್ರಕೃತಿಯೆನ್ನಲು ಅಂತೆಯಾಗಿಪ್ಪುದು.
ತಾನಿಟ್ಟ ಪಿಶಾಚಿ ತನ್ನನಾವರಿಸಿ ನುಂಗುವಂತೆ,
ಭಾವದೊಳಗಾಗಿ ಭವದೊಳಗಾದರು.
ಅಂತಲ್ಲ, ಶರಣನು, ಭಾವಾತೀತ; ಗುರುನಿರಂಜನ
ಚನ್ನಬಸವಲಿಂಗದೊಳಗೆ ಸದ್ಭಾವೈಕ್ಯ ಸದಾನಂದ.
Art
Manuscript
Music
Courtesy:
Transliteration
Śaraṇa tā tanna vinōdakke kuruhiṭṭu racisidalli
ā śaraṇana icphāmātradalli tanumanaprāṇabhāva
jñānātmaṅgaḷiruttihavu.
Adu kāraṇa gurujāta śaraṇarendu lān̄chanadhāriyāda mēle
matte namage tanubhāvavenalu anteyāgippudu
manabhāvavenalu anteyāgippudu
prāṇana prakr̥tiyennalu anteyāgippudu.
Tāniṭṭa piśāci tannanāvarisi nuṅguvante,
bhāvadoḷagāgi bhavadoḷagādaru.
Antalla, śaraṇanu, bhāvātīta; guruniran̄jana
cannabasavaliṅgadoḷage sadbhāvaikya sadānanda.