Index   ವಚನ - 1194    Search  
 
ಕಾಯ ಖಂಡಿಸದೆ ಮನ ಹರಿಯದೆ ಪ್ರಾಣ ತೊರೆಯದೆ ಭಾವ ಬಿಚ್ಚದೆ ಬರಿದೆ ಹೆಚ್ಚಿ ಬಂಧನಕ್ಕೊಳಗಾದರಲ್ಲ! ಈ ಭಾವವೇನು ಅಷ್ಟತನು ಮದಭಾವವೊ? ಅಷ್ಟಕುಲಾದಿ ಮದಭಾವವೊ! ಅಷ್ಟ ಸಂಸ್ಥಿತಾದಿ ಮದಭಾವವೊ? ಚೌರಾಸಿ ಲಕ್ಷ ಯೋನಿಯಲ್ಲಿ ತಿರುಗುವ ಸಾಮಥ್ರ್ಯಭಾವವೊ? ಹೇಳಾ! ಧರ್ಮಕರ್ತುವಿನ ಭಾವರಸವಿನೋದಮಯನೆಂದು ಬಂದ ಬಳಿಕ ಅತಿಶಯದ ಸತಿಪತಿರತಿಭಾವದಂತಿರಬೇಕಲ್ಲದೆ ಸುರೆಭಾಂಡದ ಸಿರಿಯಂತೆ ಕಾಣಿಸಿಕೊಂಡರೇನು? ಪರಿಕಿಸಿದರೆ ದುರ್ಗಂಜಳ, ಸೋಂಕದಿಪ್ಪರು ಹಿರಿಯರು. ಪರಿಕಿಸಿದರೆ ಇಂಥ ಅಂಗಹೀನ ಭವಿಗಳ ಸಂಗವನೊಲ್ಲದಿರ್ದನು ಗೌರವಾಂಗದ ಘನಚರಿತೆಯೊಳಗೊಲಿದು ಚನ್ನ ತನುಮನಭಾವ ಪ್ರಸನ್ನಲಿಂಗವು.