Index   ವಚನ - 1195    Search  
 
ಹಿರಿಯತನಕ್ಕೆ ಹೆಚ್ಚಿ, ಹೆಸರ ಹೊತ್ತು ನಡೆಗೆಟ್ಟು, ಕಡೆಗೆ ಬೇಡಿಕೊಂಡು ತಿರುಗುವ ಹಡಿಕೆ ಮುಖಮಯನ, ನಿರತಿಶಯ ಬೆಡಗಿನ ಬೇಹಾರಿಗಳೊಪ್ಪುವರೆ? ಬೂದಿಯ ಹೇರ ನೀರಲದ್ದಿ ನಾ ಹೊತ್ತುಕೊಳ್ಳೆಯೆಂದರೆ ಕ್ರಯದ ಕರ್ಮದಲ್ಲಿ ಕಾಣರೆ? ಆ ಹುಸಿಹುಂಡನ ಸೋಂಕನೊಲ್ಲದಿರ್ದ ನಿಜವಿರತಿಭಕ್ತಿಯಮುಖದಲ್ಲಿ ನಮ್ಮ ಚೆಲುವಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗನು.