Index   ವಚನ - 1201    Search  
 
ಹೊರಗೊಳಗೆ ನಾನು ನೀನಾದ ಬಳಿಕ ಪೃಥ್ವಿಯಲ್ಲಿ ತನುಶುದ್ಧವಾಯಿತ್ತು, ಅಪ್ಪುವಿನಲ್ಲಿ ಮನಶುದ್ಧವಾಯಿತ್ತು, ಅಗ್ನಿಯಲ್ಲಿ ಚಿತ್ತಶುದ್ಧವಾಯಿತ್ತು, ವಾಯುವಿನಲ್ಲಿ ಪ್ರಾಣಶುದ್ಧವಾಯಿತ್ತು, ಆಕಾಶದಲ್ಲಿ ಜ್ಞಾನಶುದ್ಧವಾಯಿತ್ತು, ಆತ್ಮನಲ್ಲಿ ಅರಿವು ಶುದ್ಧವಾಯಿತ್ತು. ಇದು ಕಾರಣ ಶುದ್ಧಸಿದ್ಧಪ್ರಸಿದ್ಧ ಪ್ರಭುವಿನಲ್ಲಿ ಭಕ್ತಿ ಶುದ್ಧವಾಯಿತ್ತು.