Index   ವಚನ - 1218    Search  
 
ಗುರುಲಿಂಗಜಂಗಮಕ್ಕೆ ಕೊಡುವುದನೇ ಬಲ್ಲನಲ್ಲದೆ ಬೇಡುವುದನರಿಯ ನೋಡಾ. ಅದೆಂತೆಂದೊಡೆ, ಪಂಚರಸಂಗಳ ರುಚಿಸೌಖ್ಯವ ಕೊಟ್ಟು ಪರಿಣಾಮವ ತೋರಬಲ್ಲನಲ್ಲದೆ ತಾನು ಒಂದರಲ್ಲಿಯೂ ಬೇಡಲರಿಯನು. ಅದು ಕಾರಣ, ಚನ್ನಗುರುಲಿಂಗಜಂಗಮಪ್ರಭುವೆ ನಿಮ್ಮ ಶರಣ ದೊರೆಗಳಿಗೆ ಕೊಡಬಲ್ಲನಾಗಿ ನರರುಗಳ ಬೇಡಲರಿಯ ಕಾಣಾ.