ಸತಿಭಾವದಿಂದ ಭಕ್ತಿಯ ಮಾಡುವೆನೆಂದು ಬರೆಬರೆದಲ್ಲಿ
ಹಿತ ತಪ್ಪಿ ಹೋಯಿತ್ತು ನೋಡಾ.
ವ್ರತಗೆಟ್ಟು ನಿಂದ ನಿಲವು ಮರವೆಯ ಮನೆಯೊಳಗೆ
ಪರಿಪರಿ ಭೋಗ ಭುಕ್ತತ್ವವನೈದಿ,
ತಾನಾರೆಂಬುವದನರಿಯದೆ ಸಮ್ಮುಖಸ್ನೇಹ ಮರೆದು
ತಾಯಿ ತಂದೆಯ ಸುಖದೊಳಗಾಗದೆ
ಮಾಯಾನಿಲವ ಧರಿಸಿದ ಮರುಳ ಕಂಡು ಮರೆದಿರ್ದನು
ನಮ್ಮ ಶಾಂತ ಐದುವರ್ಣಸಂಜ್ಞೆದೇವನು.
Art
Manuscript
Music
Courtesy:
Transliteration
Satibhāvadinda bhaktiya māḍuvenendu barebaredalli
hita tappi hōyittu nōḍā.
Vratageṭṭu ninda nilavu maraveya maneyoḷage
paripari bhōga bhuktatvavanaidi,
tānārembuvadanariyade sam'mukhasnēha maredu
tāyi tandeya sukhadoḷagāgade
māyānilava dharisida maruḷa kaṇḍu maredirdanu
nam'ma śānta aiduvarṇasan̄jñedēvanu.
ಸ್ಥಲ -
ಶೇಷಾಂಗಸ್ಥಲದ ವಚನಗಳು