ವಚನ - 1352     
 
ಪ್ರಾಣಲಿಂಗವುಳ್ಳಾತಂಗೆ ಪ್ರಾಣಲಿಂಗವೆಂಬ ವಾರ್ತೆಭಂಗ ನೋಡಾ. ಸಂಗನ ಬಸವಣ್ಣ ಬೀದಿಯಲ್ಲಿ ಕೊಡಗನೊಡೆದು ಬಯಲನುಡುಗಿದಡುಂಟೆ? ಹೇಳಾ. ಗುಹೇಶ್ವರಲಿಂಗವ ಬೇರು ಮಾಡಿ ಅರಸಲುಂಟೆ, ಬಸವಣ್ಣಾ?!