Index   ವಚನ - 1229    Search  
 
ಅರ್ಪಿತ ದಷ್ಟಗೊಂಡು ಅವಿರಳವಾಗಿರ್ದಿತ್ತು ಬಹಿರಂಗ, ಬಹಿರಂಗ ಬಳಕೆಯೊಳಗಾಗಿ ನಿರಾಳವಾಯಿತ್ತು ಅಂತರಂಗ, ಈ ಉಭಯದಷ್ಟ ತಲೆಗೊಂಡು ನಿರಂಜನವಾಯಿತ್ತು ಚೈತನ್ಯ. ಈ ತ್ರಿವಿಧವ ಭಾವಿಸಿ ನಿಂದಲ್ಲಿ ಪ್ರಸಾದಂಗ ಪರಿಪೂರ್ಣ ತಾನೆ ಚೆಲುವ ಶುದ್ಧ ಸಿದ್ಧ ಪ್ರಸಿದ್ಧ ಪ್ರಭುಲಿಂಗವು.