Index   ವಚನ - 1232    Search  
 
ಅಚ್ಚುಗವಿಲ್ಲದ ಅಚ್ಚುಗವಿದೇನಯ್ಯಾ? ಕಣ್ಣ ಮುಂದೆ ಮೆಚ್ಚುವಿಲ್ಲದ ಮೆಚ್ಚು ಇದೇನಯ್ಯಾ ಹುಚ್ಚುಗೊಂಡಿತ್ತು! ನಾನೆಂಬುದು ನಷ್ಟವಾಗಿ ನೀನೆಂಬುದು ನಿಂದುರಿದು, ಬೆಳಗಹೊದ್ದು ಬೆಳಗನುಂಡು ಬೆಂಬಳಿಯ ಸುಖವ ಮುಂಬಳಿಯೊಳಿಟ್ಟು ಮುಂಬರಿವ ನಮ್ಮ ಚೆಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗ.