Index   ವಚನ - 3    Search  
 
ಇಂದ್ರಿಯ ಆಲಿಯಲ್ಲಿ ನೋಡಿ ಕಂಡು ನಿಜವಾದ ನಿರಾಲಯಂಬದ ಗೋಲದ ಶೂನ್ಯ ನಿಃಶೂನ್ಯ ಶೂನ್ಯದ ಮೇಲೆ ಸಹಜಮಣಿ ಸ್ವಯಂಭುಜ್ಯೋತಿಯಂ ಕಂಡು, ಅದರೊಳಗೆ ವಟಮೂಲದ ಬೀಜಮಂ ಕಂಡು, ಆ ಬೀಜಾಕಾರ ಗರ್ಭದೊಳಗೆ ಆ ಮರದ ಬುಡದಲ್ಲಿ ನವರತ್ನದ ಪ್ರಕಾಶದ ಕೆರೆಯಂ ಕಂಡು, ಮೇಲೆ ಕೈಲಾಸಗೋಪುರಮಂ ಕಂಡು, ಅಲ್ಲಿರುವ ಸಮಸ್ತವ ಕಂಡೆನೆಂದು ನುಡಿವ ಭ್ರಾಂತಯೋಗಿಗೆ ಸ್ವಯಂಭು ಸಲ್ಲದು ಕಾಣಾ. ಮಾಯದಿಂದರಿವುದಲ್ಲ, ಕಾಯದಿಂದರಿವುದಲ್ಲ. ಚಿತ್ತ ಉತ್ಪತ್ಯ ಮಾಡಿದ ಸ್ಥಿತಿ ಗತಿ ಲಯ ಉಂಟಾದವೆಲ್ಲ ಕಂಡಾಗಲೆ ಕಂಡೆನು. ಜಾಗ್ರ ಮೀರಿ ಸ್ವಪ್ನದಲ್ಲಿ ಎಷ್ಟು ಕಂಡ? ಸುಷುಪ್ತಿಗತವಾದ ಮೇಲೆ ಕಾಣುವುದು ಇನ್ನೇನು ಹೇಳಾ? ಬರೆಯದ ಪುರುಷಂಗೆ ಮರವಿಲ್ಲ ಅರುವಿಲ್ಲ, ಗುರಿಯಳಿದು ನಿಂದಾನು. ವರನಾಗನ ಗುರುವೀರನೆ ಪರಂಜ್ಯೋತಿ [ಮಹಾ]ವಿರಕ್ತಿ.