Index   ವಚನ - 2    Search  
 
ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞಾ ಎಂಬ ಷಡಾಧಾರಚಕ್ರಂಗಳ ಭೇದಿಸಿಕೊಂಡು, ಬ್ರಹ್ಮ ವಿಷ್ಣು ರುದ್ರ ಈಶ್ವರ ಮಹೇಶ್ವರ ಸದಾಶಿವನ ಧ್ಯಾನಿಸಿ ಕಂಡಡೆ, ಮಹಿಮಾದಿಗಳಳಿವವೆಂದು ನುಡಿವರು. ಮುಟ್ಟಿ ಮುಟ್ಟಿ ನೋಡುವುದು ಮಾಯೆ, ಕರುಣದಿಂದ ಕಂಡುದು ಮಾಯೆ, ಮನದಿಚ್ಫೆ ಅರಿವುದು ಮಾಯೆಯಲ್ಲವೆ? ತನುಮನ ಹಿಡಿದು ನೋಡಿದುದೆಲ್ಲ ಮಾಯೆಯಲ್ಲವೆ? ದೇಹವಿಡಿದು ವಿದೇಹಿಯಾದ ಮಹಾತ್ಮಂಗೆ ದೇಹವಿಲ್ಲ ಮಾಯೆಯಿಲ್ಲ ಕರುಣವಿಲ್ಲ ಮರಣವಿಲ್ಲ ಜನನವಿಲ್ಲ. ಪ್ರತಿಯಿಲ್ಲದ ಘನಮಹತೋತ್ತಮನಾದ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.