Index   ವಚನ - 4    Search  
 
ಅಯ್ಯಾ, ತರ್ಕ ವ್ಯಾಕರಣಾಗಮ ಶಾಸ್ತ್ರ ಪುರಾಣ ಛಂದಸ್ಸು ನೈಘಂಟು ಜ್ಯೋತಿಷ್ಯ ಮೊದಲಾದ ಶಾಸ್ತ್ರದ ಆಸೆಯ ಭ್ರಮೆಯಲ್ಲಿ ಹೊಡದಾಡಿ ಸತ್ತಿತಯ್ಯ ಎನ್ನ ಶುದ್ಧಾತ್ಮನು. ಕತ್ತಿಸಾಧಕ ಕಠಾರಿಸಾಧಕ ಪಟಾಕಿನ ಸಾಧಕ ಮೊದಲಾದ ಬತ್ತೀಶ ಸಾಧಕದಲ್ಲಿ ಆಸೆ ಮಾಡಿತಯ್ಯ ಎನ್ನ ಮಹದಾತ್ಮನು. ಅಣಿಮಾ ಮಹಿಮಾ ಗರಿಮಾ ಲಘಿಮಾ ಪ್ರಾಪ್ತಿ ಪ್ರಾಕಾಮ್ಯ ಈಶಿತ್ವ ವಶಿತ್ವವೆಂಬ ಅಷ್ಟೈಶ್ವರ್ಯದಲ್ಲಿ ಆಸೆ ಮಾಡಿತಯ್ಯ ಎನ್ನ ಚಿದಾತ್ಮನು. ಹೀಂಗೆ ಅಜ್ಞಾನವೆಂಬ ಭವಪಾಶದಿಂದ ಹೊಡದಾಡಿ ಸತ್ತು, ಸತ್ತು-ಹುಟ್ಟಿ ಭವಕ್ಕೆ ಒಳಗಾಗಿ ಕೆಟ್ಟೆನಯ್ಯ. ಭವರೋಗವೈದ್ಯನೆ, ಸಲಹಾ, ಶ್ರೀಗುರುಲಿಂಗಜಂಗಮವೆ. ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.