Index   ವಚನ - 5    Search  
 
ಅಯ್ಯಾ, ಇಂತೀ ಆಸೆಯೆಂಬ ಮಾಯಾಪಾಶದಲ್ಲಿ ಜಡತ್ವದಿಂದ ಕಂಗೆಟ್ಟು, ಕಂದಿ ಕುಂದಿ, ನಿಜವ ಮರದು ನಿಮ್ಮ ಸದ್ಭಕ್ತಿ-ಸದಾಚಾರ-ಸತ್ಕ್ರೀಯ ಸಮ್ಯಜ್ಞಾನದ ಹೊಲಬನರಿಯದೆ ಅಜ್ಞಾನವೆಂಬ ಆಸೆಯ ಪಾಶದಲ್ಲಿ ಜನ್ಮ ಜರೆ ಮರಣದಿಂದ ಇರುವೆ ಮೊದಲಾನೆ ಕಡೆಯಾದ ಎಂಬತ್ನಾಲ್ಕು ಜೀವಜಂತುವಿನಲ್ಲಿ ತಿನ್ನಬಾರದ ಆಹಾರಂಗಳ ತಿಂದು, ಮಾಡಬಾರದಪರಾಧ ಕೃತ್ಯವ ಮಾಡಿ ಪರಮಪಾತಕತನದಿಂದ ಬಾಳಿ ಬದುಕಿ ಜೀವಿಸಿದ ಅಜ್ಞಾನ ಜಡತ್ವವ ನೋಡದೆ ನಿಮ್ಮ ದಯಾಂಬುಧಿಯಲ್ಲಿರಿಸಿ ರಕ್ಷಿಸಯ್ಯ. ಪರಮಪಾವನಮೂರ್ತಿ ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.