Index   ವಚನ - 11    Search  
 
ಅಯ್ಯಾ, ಗುರು ಚರ ಪರಭಕ್ತಗಣಂಗಳನುಣ್ಣಿಸಿ ಬಣ್ಣಿಸಿ, ಆಣೆ ಪ್ರಮಾಣಂಗಳ ಮಾಡಿ, ನಿಮ್ಮ ಪದಾರ್ಥವ ನಿಮಗೆ ವಂಚನೆಯಿಲ್ಲದೆ ತಂದೊಪ್ಪಿಸುವೆನೆಂದು ಮೃದುತರನುಡಿಯಿಂದ ಧನಧಾನ್ಯದ್ರವ್ಯವ ತಂದು, ಗುಹ್ಯಲಂಪಟ ಮೊದಲಾಗಿ ಸಮಸ್ತಲಂಪಟಕ್ಕೆ ಉದರಪೋಷಣವ ಹೊರದು, ಆ ಗುರುಚರ ಪರಭಕ್ತಗಣಂಗಳು ಬಂದು, 'ನಮ್ಮ ಪದಾರ್ಥವ ಕೊಡು' ಎಂದು ಬೇಡಿದಲ್ಲಿ ಕಡುದ್ರೇಕದಿಂದ ಮರಳಿ 'ನಿಮ್ಮ ಪದಾರ್ಥವನಾರು ಬಲ್ಲರು? ' ನೀವೆ ನನಗೆ ಕೊಡಬೇಕಲ್ಲದೆ ನಾ ನಿಮಗೆಲ್ಲಿಯದ ಕೊಡಬೇಕೆಂದು ಸಮಸ್ತ ಜನ್ಮಾಂತರದಲ್ಲಿ ಹುಸಿಯನೆ ನುಡಿದು, ಹುಸಿಯನೆ ಮನೆಗಟ್ಟಿ, ಅವರಿಗೆ ಇಲ್ಲದಪವಾದವ ಕಲ್ಪಿಸಿ, ಕುಂದು ನಿಂದ್ಯವ ನುಡಿದು, ಗುರುಚರ ಪರಭಕ್ತಗಣ ದ್ರೋಹಿಯಾಗಿ ಯಮನಿಗೀಡಾಯಿತ್ತಯ್ಯ ಎನ್ನ ವಾಗೇಂದ್ರಿಯವು. ಇಂತು ದುರ್ಜನಸಂಗದಿಂದ ನಿಮ್ಮ ಚರಣದ ನಿಜನೈಷ್ಠೆಯನರಿಯದೆ ಭವಬಂಧನಕ್ಕೊಳಗಾದ ಅಂಧಕಂಗೆ, ಸತ್ಪಥವ ತೋರಿ ದಯವಿಟ್ಟು ನಿಮ್ಮ ಸದ್ಭಕ್ತ ಶಿವಶರಣ ಮಾರಯ್ಯಗಳ ಮನೆಯ ರಜಂಗಳ ಹೊಡವ ತೊತ್ತಿನ ತೊತ್ತಿನ ಒಕ್ಕು ಮಿಕ್ಕುದ ಕೊಡಿಸಿ ಸಲಹಯ್ಯ. ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.