ಅಯ್ಯಾ, ಮತ್ತೊಂದು ವೇಳೆ
ಸಪ್ತಧಾತು ಸಪ್ತವ್ಯಸನವಕೂಡಿ ವರ್ತಿಸಿತಯ್ಯ.
ಅದೆಂತೆಂದಡೆ, ರಸ ರುಧಿರ ಮಾಂಸ ಮೇದಸ್ಸು
ಅಸ್ಥಿ ಮಜ್ಜೆ ಶುಕ್ಲವೆಂಬ ಧಾತುಗಳ
ಅನ್ನ ನೀರಿನಿಂದ ಪೋಷಿಸಿಕೊಂಡು,
ತನುವ್ಯಸನ, ಮನವ್ಯಸನ, ಧನವ್ಯಸನ,
ರಾಜವ್ಯಸನ, ಉತ್ಸಾಹವ್ಯಸನ, ವಿಶ್ವವ್ಯಸನ, ಸೇವಕವ್ಯಸನವೆಂಬ
ಸಪ್ತವ್ಯಸನಿಯಾಗಿ ಷಡೂರ್ಮೆ-ಷಡ್ಭಾವವಿಕಾರದಿಂದ
ಎನ್ನ ತೊಳಲಿಬಳಲಿಸಿ ಅಳಲಿಸಿತಯ್ಯ ಕುಲಗೇಡಿ ಜೀವಮನವು.
ಈ ಜೀವಮನದ ಸಂಗವ ತೊಲಗಿಸಿ ರಕ್ಷಿಸಯ್ಯ,
ದುರಿತಹರ ಪಾಪಹರ ಶ್ರೀಗುರುಲಿಂಗಜಂಗಮವೆ
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ!
Art
Manuscript
Music
Courtesy:
Transliteration
Ayyā, mattondu vēḷe
saptadhātu saptavyasanavakūḍi vartisitayya.
Adentendaḍe, rasa rudhira mānsa mēdas'su
asthi majje śuklavemba dhātugaḷa
anna nīrininda pōṣisikoṇḍu,
tanuvyasana, manavyasana, dhanavyasana,
rājavyasana, utsāhavyasana, viśvavyasana, sēvakavyasanavemba
saptavyasaniyāgi ṣaḍūrme-ṣaḍbhāvavikāradinda
enna toḷalibaḷalisi aḷalisitayya kulagēḍi jīvamanavu. Ī jīvamanada saṅgava tolagisi rakṣisayya,
duritahara pāpahara śrīguruliṅgajaṅgamave
harahara śivaśiva jayajaya karuṇākara
matprāṇanātha mahāśrīgurusid'dhaliṅgēśvara!