•  
  •  
  •  
  •  
Index   ವಚನ - 136    Search  
 
ಭಕ್ತ ಭಕ್ತನೆಂಬರು, ಪೃಥ್ವಿಯ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ಅಪ್ಪುವಿನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ತೇಜದ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ವಾಯುವಿನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ಆಕಾಶದ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ಸೋಮಸೂರ್ಯರ ಕಳೆಗಳ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ಆತ್ಮನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ಭಕ್ತರೆಂದು ಲಿಂಗವ ಪೂಜಿಸುವವರ ಕಂಡು ನಾನು ಬೆರಗಾದೆ ಗುಹೇಶ್ವರಾ.
Transliteration Bhakta bhaktanembaru, pr̥thviya pūrvāśrayava kaḷeyalariyadannakka, appuvina pūrvāśrayava kaḷeyalariyadannakka, tējada pūrvāśrayava kaḷeyalariyadannakka, vāyuvina pūrvāśrayava kaḷeyalariyadannakka, ākāśada pūrvāśrayava kaḷeyalariyadannakka, sōmasūryara kaḷegaḷa pūrvāśrayava kaḷeyalariyadannakka, ātmana pūrvāśrayava kaḷeyalariyadannakka, bhaktarendu liṅgava pūjisuvavara kaṇḍu nānu beragāde guhēśvarā.
English Translation 2 We are pious, we are pious, they cry! I am shocked to see, O Guheśvara, The self-styled devotees Worship the Linga Without clearing the taint Of earth and water, Of fire, and air, and sky, Of sun and moon And self.
Hindi Translation भक्त भक्त कहते हैं_ पृथ्वि का पूर्वाश्रय बिना छूटने तक, जल का पूर्वाश्रय बिना छूटने तक, अग्नि का पूर्वाश्रय बिना छूटने तक, वायु का पूर्वाश्रय बिना छूटने तक, आकाश का पूर्वाश्रय बिना छूटने तक, सोमसूर्य का पूर्वाश्रय बिना छुटनेतक, आत्मा का पूर्वाश्रय बिना छूटने तक , भक्त कहने लिंग पूजाकरनेवालों को देख मैं चकित हुआ गुहेश्वरा। Translated by: Eswara Sharma M and Govindarao B N
Tamil Translation பக்தன் பக்தன் என இயம்புவர், நிலத்தின் முன்னியல்பை அகற்றும்வரை, நீரின் முன்னியல்பை அகற்றும் வரை, தீயின் முன்னியல்பை அகற்றும் வரை, வாயுவின் முன்னியல்பை அகற்றும் வரை, ஆகாயத்தின் முன்னியல்பை அகற்றும் வரை, சந்திர, சூரியனின் முன்னியல்பை அகற்றும் வரை, ஜீவனின் முன்னியல்பை அகற்றும் வரை, பக்தன் என்று இலிங்கத்தைப் பூஜிப்பவரைக் கண்டு நான் வியப்பெய்தினேன் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಳೆಯುವುದು = ಆ ಪೂರ್ವದ ಭಾವನೆಗಳನ್ನು ತ್ಯಜಿಸುವುದು; ಪೂರ್ವಾಶ್ರಯ = ಮೊದಲಿನ ಭಾವನೆಗಳು, ಭಕ್ತಿ ಮಾರ್ಗಕ್ಕೆ ಬರುವ ಮುಂಚೆ ಜಗತ್ತು ಹಾಗೂ ಜೀವನದದ ಬಗೆಗೆ ಇರುವ ದೃಷ್ಟಿಕೋನ, ಕಲ್ಪನೆ ಹಾಗೂ ನ; ಪೂರ್ವಾಶ್ರಯನು = ಸಂಸಾರಿ; Written by: Sri Siddeswara Swamiji, Vijayapura