•  
  •  
  •  
  •  
Index   ವಚನ - 137    Search  
 
ಅನ್ಯ ರಜವ ಸೋಂಕದೆ, ತನ್ನ ರಜವ ಬಾಧಿಸದೆ, ರವಿಯ ಬೆಳಸ ಬಳಸದೆ ಲಿಂಗದಲ್ಲಿ ಬೆಳೆದ ಬೆಳಸ ತಂದು, ಜಂಗಮದಲ್ಲಿ ಸವೆಸುತಿಪ್ಪ[ನು] ಲಿಂಗಭಕ್ತ. ಆ ಭಕ್ತನಲ್ಲಿ ಗುಹೇಶ್ವರಲಿಂಗವಿಪ್ಪನು.
Transliteration An'ya rajava sōṅkade, tanna rajava bādhisade, raviya beḷasa baḷasade liṅgadalli beḷeda beḷasa tandu, jaṅgamadalli savesutippa[nu] liṅgabhakta. Ā bhaktanalli guhēśvaraliṅgavippanu.
English Translation 2 The Bhakta who brings to his Jangama The harvest of the Linga And spends it out, grain by grain, Untainted by the taint of others, By his own undefiled, And leaves alone the harvest of the sun, In such as he does Guheśvara dwell!
Hindi Translation दूसरों के द्रव्य को न चाहते, अपने शरीर को न बाधा करके, सूर्य के प्रकाश को बिना इस्तेमाल किये, लिंग से प्राप्त वस्तु लाकर, जंगम की सेवा में अर्पित करनेवाला लिंग भक्त। उस भक्त में गुहेश्वर लिंग है। Translated by: Eswara Sharma M and Govindarao B N
Tamil Translation பிறரைச் சார்ந்த பொருளைத் தீண்டாமல், தன் உடலைக் கெடுத்துக் கொள்ளாமல், இயற்கை அளித்த பொருட்கள் எனப் பயன்படுத்தாமல், இலிங்கம் அளித்த செல்வம் எனக்கருதி, ஜங்கமருக்கு இலிங்கபக்தன் அளிப்பான் அந்த பக்தனிடம் குஹேசுவரலிங்கம் உறைகிறான். Translated by: Smt. Kalyani Venkataraman, Chennai
ಶಬ್ದಾರ್ಥಗಳು ಅನ್ಯರಜ = ಅನ್ಯರು ಕಷ್ಟಪಟ್ಟು ಗಳಿಸಿದ ದ್ರವ್ಯ; ತನ್ನ ರಜ = ಸ್ಥೂಲದೇಹ; ಬಳಸದೆ = ಉಪಯೋಗಿಸದೆ; ಬಾಧಿಸದೆ = ಕೆಡಿಸದೆ; ರವಿ = ಈ ಪದವು ಪ್ರಕೃತಿಸೂಚಕ; ರವಿಯ ಬೆಳಸು = ಪ್ರಾಕೃತಿಕ ದ್ರವ್ಯ, ಧನಧಾನ್ಯಾದಿ; ಸೋಂಕದೆ = ಮುಟ್ಟದೆ; Written by: Sri Siddeswara Swamiji, Vijayapura