Index   ವಚನ - 11    Search  
 
ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯ, ಆತ್ಮನೆಂಬ ಅಷ್ಟತನುಮೂರ್ತಿಸ್ವರೂಪುಗೊಳ್ಳದಂದು, ನಾನು, ನೀನೆಂಬ ಭ್ರಾಂತುಸೂತಕ ಹುಟ್ಟದಂದು, ನಾಮ, ರೂಪು, ಕ್ರೀಗಳೇನುಯೇನೂ ಇಲ್ಲದಂದು, ಸರ್ವಶೂನ್ಯವಾಗಿರ್ದೆಯಲ್ಲ ನೀನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.