Index   ವಚನ - 13    Search  
 
ಅಂತರವಿಲ್ಲದಂದು, ಬಾಹ್ಯವಿಲ್ಲದಂದು, ಅಡಿ, ಮುಡಿ, ಒಡಲು, ಮತ್ತೊಂದೆಡೆಯೇನೂ ಇಲ್ಲದಂದು, ದಶದಿಕ್ಕುಗಳು ವಿಶ್ವಪ್ರಪಂಚುಯೇನೂ ಇಲ್ಲದಂದು, ಸ್ಥಾವರ ಜಂಗಮಾತ್ಮಕಂಗಳಿಗೆ ಆಧಾರ ಕರ್ತೃವೆಂಬ ನಾಮಂಗಳೇನೂ ಇಲ್ಲದಂದು, ಸರ್ವಶೂನ್ಯ ನಿರಾಲಂಬವಾಗಿರ್ದೆಯಲ್ಲಾ ನೀನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.