Index   ವಚನ - 15    Search  
 
ಅಂದಾದಿಬಿಂದು ಉದಯಿಸದಂದು, ಮಾಯಾಶಕ್ತಿ ಹುಟ್ಟದಂದು, ಪರಶಿವತತ್ವದಲ್ಲಿ ಚಿತ್ತು ತಲೆದೋರದಂದು, ಚಿತ್ತಿನಿಂದ ನಾದ ಬಿಂದು ಕಳೆಗಳುದಯವಾಗದಂದು, ನಾದ ಬಿಂದು ಕಳೆವೊಂದಾಗಿ ಚಿತ್ಪಿಂಡ ರೂಹಿಸದಂದು, ಶೂನ್ಯ ಮಹಾಶೂನ್ಯವಿಲ್ಲದಂದು, ನಿಃಕಲ ನಿರಾಳತತ್ವನೆಂಬ ಹೆಸರಿಲ್ಲದಂದು, ನಿತ್ಯನಿರಂಜನ ನೀನೊರ್ಬನೆಯಿರ್ದೆಯಲ್ಲ ನಿನ್ನ ನೀನರಿಯದೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.