Index   ವಚನ - 17    Search  
 
ತನುವಿಲ್ಲದಂದಿನ, ಮನವಿಲ್ಲದಂದಿನ, ಕಾಲಕರ್ಮಂಗಳಿಲ್ಲದಂದಿನ, ಕರಣಂಗಳಿಲ್ಲದಂದಿನ, ಇಂದ್ರಿಯಂಗಳ ವ್ಯವಹಾರದ ಸುಖವಿಲ್ಲದಂದಿನ, ಇವೇನುಯೇನೂ ಇಲ್ಲದಂದು, ನೀನು, ಶೂನ್ಯನಾಗಿರ್ದೆಯಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.