ಬಯಲ ಪೀಠದಲ್ಲಿ ನಿರ್ವಯಲ ಕಂಡಿಹೆನೆಂದಡೆ,-
`ಅತ್ಯತಿಷ್ಟದ್ದಶಾಂಗುಲ' ಎಂಬ ಶ್ರುತಿಯ ನೋಡಲು,
ಮತ್ತೆ `ವಾಚಾತೀತಂ ಮನೋತೀತಂ ಭಾವಾತೀತಂ ಪರಂ ಶಿವಂ'
ಎಂಬುದ ವಿಚಾರಿಸಿ ನೋಡೆ.
ಸ್ಥಾನಮಾನಕ್ಕೆ ಬಂದಿತೆಂಬ ಶ್ರುತಿಯುಂಟೆ?
ಕಾಯದ ಜೀವದ ಹೊಲಿಗೆಯ ಬಿಚ್ಚಿ,
ನಾದ ಬಿಂದುವಂ ತಿಳಿದು
ಪರಿಪೂರ್ಣ ಜ್ಞಾನಿಯಾಗಿ,
ಪರಿಪೂರ್ಣಶಿವನನೊಳಕೊಳ್ಳಬಲ್ಲ ಶರಣನೆ,
ಗುಹೇಶ್ವರಲಿಂಗದಲ್ಲಿ ಸಹಜ ಶಿವಯೋಗಿ
ಕಾಣಾ ಸಿದ್ಧರಾಮಯ್ಯಾ.
Transliteration Bayala pīṭhadalli nirvayala kaṇḍ'̔ihenendaḍe,-
`atyatiṣṭaddaśāṅgula' emba śrutiya nōḍalu,
matte `vācātītaṁ manōtītaṁ bhāvātītaṁ paraṁ śivaṁ'
embuda vicārisi nōḍe.
Sthānamānakke banditemba śrutiyuṇṭe?
Kāyada jīvada holigeya bicci,
nāda binduvaṁ tiḷidu
paripūrṇa jñāniyāgi,
paripūrṇaśivananoḷakoḷḷaballa śaraṇane,
guhēśvaraliṅgadalli sahaja śivayōgi
kāṇā sid'dharāmayyā.
Hindi Translation शून्य पीठ में निर्वयल देखे कहेंतो-
'अत्यनिष्ठादशांगुल ' कहें शृति देखे तो
फिर 'वचातीतं मानोतीतं भावातीतं परंशिवं'’
कहना विचार कर देखे तो
स्थानमान को आयीकहीं शृति है?
शरीर के जीव की सिलाई खोले, नाद बिंदु जानकर
परिपूर्ण ज्ञानी बने, परिपूर्ण शिव को अपनाये जाननेवाला शरण ही,
गुहेश्वर लिंग में सहज शिवयोगी देख सिद्धरामय्या।
Translated by: Eswara Sharma M and Govindarao B N