ವೇದ ಶಾಸ್ತ್ರ ಪುರಾಣಾಗಮಂಗಳುದಯವಾಗದಂದು,
ದ್ವೈತಾದ್ವೈತವಿಲ್ಲದಂದು
ಶ್ವೇತ, ಪೀತ, ಹರಿತ, ಮಾಂಜಿಷ್ಠ, ಕಪೋತ, ಮಾಣಿಕ್ಯವರ್ಣವೆಂಬ
ಈ ಷಡುವರ್ಣ ಮುಖ್ಯವಾದ
ಸಮಸ್ತ ವರ್ಣಂಗಳಿಲ್ಲದಂದು,
ನೀನು, ವಾಚಾತೀತ ಮನಾತೀತ ವರ್ಣಾತೀತ
ಭಾವಾತೀತ ಜ್ಞಾನಾತೀತನಾಗಿ,
ನೀನು, ನೀಕಲನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Sādhya sādhakarilladandu,
pūjya pūjakarilladandu,
dēva bhaktanemba nāma taledōradandu,
upāsya upāsakarilladandu,
aṅgasthala liṅgasthalavāgadandu,
ninna, niḥkala śivatatvavendenu kāṇā,
mahāliṅgaguru śivasid'dhēśvara prabhuvē.