ಸ್ಥಾವರ ಜಂಗಮಾತ್ಮಕಂಗಳ ಲಯ ಗಮನಂಗಳಿಗೆ ಆಧಾರವಾಗಿ
ನಿರ್ಮಲವಾಗಿ, ಸ್ಥಿರವಾಗಿ, ಸರ್ವಸರ್ವಜ್ಞ ಸರ್ವಾತ್ಮಕ
ನಿರ್ವಿಕಾರ ನಿತ್ಯಾತ್ಮಕನಾದ ಪರಮಾತ್ಮಲಿಂಗವು,
``ಪರಂ ಗೂಢಂ ಶರೀರರಸ್ಥಂ ಲಿಂಗಕ್ಷೇತ್ರಮನಾದಿವತ್|
ಯಥಾದಿಮೀಶ್ವರಂ ತೇಜಂ ತಲ್ಲಿಂಗಂ ಪಂಚಸಂಜ್ಞಕಂ||'
ಎಂಬ ಪಂಚಸಂಜ್ಞೆಯನೊಳಕೊಂಡು
``ಆಣೋರಣೀಯಾನ್ ಮಹತೋ ಮಹೀಯಾನ್' ಎಂದುದಾಗಿ,
ಅಣುವಿಂಗಣು ಮಹತ್ತಕ್ಕೆ ಮಹತ್ತಾಗಿಪ್ಪ ಮಹಾಲಿಂಗದ
ನಿಲುಕಡೆ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Sthāvara jaṅgamātmakaṅgaḷa laya gamanaṅgaḷige ādhāravāgi
nirmalavāgi, sthiravāgi, sarvasarvajña sarvātmaka
nirvikāra nityātmakanāda paramātmaliṅgavu,
``paraṁ gūḍhaṁ śarīrarasthaṁ liṅgakṣētramanādivat|
yathādimīśvaraṁ tējaṁ talliṅgaṁ pan̄casan̄jñakaṁ||'
emba pan̄casan̄jñeyanoḷakoṇḍu
``āṇōraṇīyān mahatō mahīyān' endudāgi,
aṇuviṅgaṇu mahattakke mahattāgippa mahāliṅgada
nilukaḍe kāṇā, mahāliṅgaguru śivasid'dhēśvara prabhuvē.