Index   ವಚನ - 40    Search  
 
ಸದ್ರೂಪು ಶರಣನಲ್ಲದೆ, ಅಸದ್ರೂಪು ಶರಣನಲ್ಲ. ಚಿದ್ರೂಪು ಶರಣನಲ್ಲದೆ, ಆಚಿದ್ರೂಪು ಶರಣನಲ್ಲ. ಆನಂದಸ್ವರೂಪು ಶರಣನಲ್ಲದೆ, ಅನಾನಂದಸ್ವರೂಪು ಶರಣನಲ್ಲ. ಇದು ಕಾರಣ ನಿಮ್ಮ ಶರಣರು ಪರಮ ನಿರ್ಮಲ ಸಚ್ಚಿದಾನಂದ ನಿತ್ಯ ಪರಿಪೂರ್ಣ ಪರಶಿವ ಸ್ವರೂಪ ತಾನೆ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.