Index   ವಚನ - 46    Search  
 
ಆದಿಪರಮೇಶ್ವರನು ತನ್ನ ವಿನೋದಾರ್ಥ ಕಾರಣ ಶರಣನಾಗಿ ತೋರಿದರೆ, ಭೇದವ ಮಾಡಿ ನುಡಿವ ವಾದಿಗಳ ಬಾಯಲ್ಲಿ ಕೆರಹನಿಕ್ಕುವೆನು. ಅನಾದಿ ಪರಶಿವನು ತಾನೆ ಶರಣನೆಂಬ ವಾಕ್ಯ ಸತ್ಯ ಕಂಡಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.