ಅನಾದಿ ಪರಶಿವತತ್ವದಿಂದ ಚಿತ್ತು ಉದಯವಾಯಿತ್ತು.
ಆ ನಿರ್ಮಲಮಹಾಜ್ಞಾನಚಿತ್ಸ್ವರೂಪವೇ ಬಸವಣ್ಣ ನೋಡಾ.
ಆ ಬಸವಣ್ಣನಿಂದ ನಾದ ಬಿಂದು ಕಳೆ.
ಆ ನಾದ ಬಿಂದು ಕಳೆ ಸಮರಸವಾಗಿ
ಅಖಂಡಪರಿಪೂರ್ಣಗೋಳಕಾಕಾರ ತೇಜೋಮೂರ್ತಿ
ಲಿಂಗಸ್ವರೂಪವಾಯಿತ್ತು ನೋಡಾ.
ಆ ಮಹಾಲಿಂಗದ ಪಂಚಸಾದಾಖ್ಯಮೂರ್ತಿ ಉತ್ಪತ್ತಿಯಾಯಿತ್ತು ನೋಡಾ
ಇದು ಕಾರಣ,
ಅನಾದಿಶರಣ ಆದಿಲಿಂಗವೆಂದೆ,
ಬಸವಣ್ಣನಿಂದ ಲಿಂಗವಾದ ಕಾರಣ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.