Index   ವಚನ - 56    Search  
 
ಶಿವನೇ ಶರಣ, ಶರಣನೇ ಶಿವನೆಂದೆಂಬರು. ಹೀಗೆಂದೆಂಬುದು ಶ್ರುತಪ್ರಮಾಣದ ವಾಚಾಳಕತ್ವವಲ್ಲದೆ ಪರಮಾರ್ಥವಲ್ಲ ನೋಡಾ. ಶರಣನೇ ಲಿಂಗವೆಂಬುದು ಏಕಾರ್ಥವಾದಡೆ, ಇತರ ಮತದ ದ್ವೈತಾದ್ವೈತ ಶಾಸ್ತ್ರವ ಕೇಳಿ, ಅಹುದೋ ಅಲ್ಲವೋ, ಏನೋ ಎಂತೋ ಎಂದು ಸಂದೇಹಿಸಿದಲ್ಲಿ ಅದು ಅಜ್ಞಾನ ನೋಡಾ. ಶಿವಜ್ಞಾನ ಉದಯವಾದ ಶರಣರ ಆದಿ ಮಧ್ಯಾವಸಾನವರಿದು, ನಿಶ್ಚಯಿಸಿ, ನೆಲೆಗೊಂಡ ಬಳಿಕ ಇತರ ಮತದ ವೇದ ಶಾಸ್ತ್ರ ಪುರಾಣ ಆಗಮಂಗಳ ಶ್ರುತಿ ಭ್ರಾಂತಿಗೆ ಭ್ರಮೆಗೊಂಬನೆ ನಿಭ್ರಾಂತನಾದ ನಿಜಲಿಂಗೈಕ್ಯನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.