Index   ವಚನ - 64    Search  
 
ವಸ್ತುವೆಂದರೆ ಪರಬ್ರಹ್ಮದ ನಾಮ. ಆ ವಸ್ತು ತನ್ನಿಂದ ಭಾವವ ಕಲ್ಪಿಸಿ, ಆ ಭಾವದಿಂದ ಮಾಯವ ಕಲ್ಪಿಸಿ, ಆ ಮಾಯದಿಂದ ಮೋಹವ ಕಲ್ಪಿಸಿ, ಆ ಮೋಹದಿಂದ ಸಕಲ ಪ್ರಪಂಚುವ ಹುಟ್ಟಿಸಿ, ಆ ಪ್ರಪಂಚಿನಿಂದ ಸಮಸ್ತ ಜಗತ್ತು ಹುಟ್ಟಿತ್ತು ನೋಡಾ. ಇಂತಿವೆಲ್ಲವು ನೀನಾಗೆಂದಡಾದವು; ನೀ ಬೇಡಾಯೆಂದಡೆ ಮಾದವು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.