ಶಿವನೂ ಉಂಟು, ಆತ್ಮನೂ ಉಂಟು, ಮಾಯೆಯೂ ಉಂಟು
ಎಂಬೆ ಎಲೆ ಮರುಳು ಮಾನವ.
ಆತ್ಮನನಾದಿಯೋ, ಮಾಯೆಯನಾದಿಯೋ, ಶಿವನನಾದಿಯೋ?
ಈ ಮೂರೂ ಅನಾದಿಯಲ್ಲಿ ಉಂಟಾದರೆ,
ಆದಿಯೆಂದಡೆ ದೇಹ, ಅನಾದಿಯೆಂದೆಡೆ ಆತ್ಮನು.
ದೇಹವೂ ಆತ್ಮನೂ ಮಾಯೆಯೂ
ಈ ಮೂರೂ ಇಲ್ಲದಂದು
ನಿತ್ಯನಿರಂಜನ ಪರಶಿವತತ್ವವೊಂದೇ ಇದ್ದಿತ್ತೆಂಬುದು
ಯಥಾರ್ಥವಲ್ಲದೆ, ಉಳಿದವೆಲ್ಲ ಹುಸಿ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Śivanū uṇṭu, ātmanū uṇṭu, māyeyū uṇṭu
embe ele maruḷu mānava.
Ātmananādiyō, māyeyanādiyō, śivananādiyō?
Ī mūrū anādiyalli uṇṭādare,
ādiyendaḍe dēha, anādiyendeḍe ātmanu.
Dēhavū ātmanū māyeyū
ī mūrū illadandu
nityaniran̄jana paraśivatatvavondē iddittembudu
yathārthavallade, uḷidavella husi kāṇā,
mahāliṅgaguru śivasid'dhēśvara prabhuvē.
ಸ್ಥಲ -
ಪಂಚಮೂರ್ತಿ ಲಿಂಗಸ್ಥಲ