Index   ವಚನ - 70    Search  
 
ಆತ್ಮನೂ ಉಂಟು, ಮಲಮಾಯಾ ಕರ್ಮಂಗಳೂ ಉಂಟು; ಶಿವನೂ ಉಂಟು ಎಂದಡೆ, ಶಿವನೇನು ಪರಿಪೂರ್ಣನೋ ಖಂಡಿತನೋ? ಶಿವನೇನು ಕಿಂಚಿಜ್ಞನೋ ಸರ್ವಜ್ಞನೋ? ಶಿವನು ಪರಿಪೂರ್ಣನಾದಡೆ, ಮಲಮಾಯಾ ಕರ್ಮಂಗಳಿದ್ದೆಡೆ ಯಾವುದು ಹೇಳಾ. ಖಂಡಿತನೆಂಬೆಯಾ ಶಿವನೊಂದು ಮೂಲೆಯಲ್ಲಿಪ್ಪನೆ? ಸರ್ವವ್ಯಾಪಕನೆಂಬುದು ಹುಸಿಯೆ? ಸರ್ವಜ್ಞನೆಂಬುದು ಹುಸಿಯೆ? ಆದಡೆ ಕಿಂಚಿಜ್ಞನೆನ್ನು. ಕಿಂಚಿಜ್ಞನೆಂಬ ಶಾಸ್ತ್ರವುಂಟೇ? ಪರಿಪೂರ್ಣಸರ್ವಮಯವಾದ ವಸ್ತು ನೀನೊಬ್ಬನೆಯಾಗಿ ಪ್ರತಿಯಿಲ್ಲದಪ್ರತಿಮ ನೀನೇ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.