Index   ವಚನ - 84    Search  
 
ಹೃದಯಕಮಲ ಕರ್ಣಿಕಾವಾಸದಲ್ಲಿ ದಿಟಪುಟಜ್ಞಾನ ಉದಯವಾಗಿ ಧಿಕ್ಕರಿಸಲಾಗಿ, ಸಟೆ ದೂರವಾಗಿ ವಿವರ್ಜಿತವಾದವು ನೋಡಾ. ಕುಟಿಲ ಕುಹಕ ಆಟಮಟ ಅಭ್ರಚ್ಛಾಯವಳಿದು ಹೋಗದ ಮುನ್ನ, ಸ್ಫಟಿಕ ಪ್ರಜ್ವಲಾಕಾರವಾಯಿತ್ತು ನೋಡಾ. ಆ ಶಿವಜ್ಞಾನಪ್ರಭೆಯೊಳಗೆ ನಿಟಿಲ ಲೋಚನನೆಂಬ ನಿತ್ಯನ ಕಂಡು, ಅದೇ ಎನ್ನ ನಿಜವೆಂದು ಬೆರಸಿ ಅಭಿನ್ನ ಸುಖಿಯಾಗಿರ್ದೆನಯ್ಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.