Index   ವಚನ - 90    Search  
 
ನೀರಜದೊಳಗೆ ಹುಟ್ಟಿದ ಕಿಚ್ಚು, ವಾರಿಧಿಯ ಕುಡಿವುದ ಕಂಡೆನಯ್ಯ. ಸಾಗರಬತ್ತಿ, ಇಪ್ಪತ್ತೈದು ಗ್ರಾಮವ ನುಂಗಿದ ಕಪ್ಪೆ, ಬಾಯಾರಿ ಸತ್ತಿತ್ತು ಕಾಣಾ ದೇವ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.