ಬಸವಣ್ಣ ಎಂಬಲ್ಲಿ ಎನ್ನ ಕಾಯ ಬಯಲಾಯಿತ್ತು.
ಚೆನ್ನಬಸವಣ್ಣ ಎಂಬಲ್ಲಿ ಎನ್ನ ಪ್ರಾಣ ಬಯಲಾಯಿತ್ತು.
ಈ ಉಭಯಸ್ಥಲ ನಿರ್ಣಯದ ನಿಷ್ಪತ್ತಿ,
ಗುಹೇಶ್ವರಲಿಂಗ ಸಾಕ್ಷಿಯಾಗಿ ಚೆನ್ನಬಸವಣ್ಣನಿಂದ
ಸಾಧ್ಯವಾಯಿತ್ತು ಕಾಣಾ ಸಂಗನಬಸವಣ್ಣಾ.
Transliteration Basavaṇṇa emballi enna kāya bayalāyittu.
Cennabasavaṇṇa emballi enna prāṇa bayalāyittu.
Ī ubhayasthala nirṇayada niṣpatti,
guhēśvaraliṅga sākṣiyāgi cennabasavaṇṇaninda
sādhyavāyittu kāṇā saṅganabasavaṇṇā.
Hindi Translation बसवण्णा कहने में मेरा शरीर शून्य हुआ था।
चेन्नबसवण्णा कहने में मेरा प्राण शून्य हुआ था।
ये दोनों स्थल निर्णय की निष्पत्ती हैं।
गुहेश्वरा लिंग साक्षी बने चेन्नबसवण्णा से
साध्य हुआ था देख संगनबसवण्णा।
Translated by: Eswara Sharma M and Govindarao B N