Index   ವಚನ - 99    Search  
 
ವಾರಣದುದರದಲ್ಲಿ ಮಾರಿ ಮನೆಯ ಮಾಡಿಕೊಂಡಡಿಪ್ಪಳು ನೋಡಾ. ಮಾರಿಯ ಮನೆಯ ಹೊಕ್ಕವರೆಲ್ಲ ದಾರಿಯ ಕಾಣದೆ, ಹೋರಾಟಗೊಳುತ್ತಿದ್ದಾರೆ ನೋಡಾ. ಇವರೆಲ್ಲರ ಹೋರಾಟವ ಕಂಡು, ಮೂರುಲೋಕದ ಮಸ್ತಕವ ಮೆಟ್ಟಿ ನಿಲಲು, ವಾರುಣದುದರ ಬೆಂದಿತ್ತು. ಮಾರಿ ಸತ್ತಳು. ದಾರಿ ನಿವಾಟವಾಯಿತ್ತು ನಿಮ್ಮವರಿಗೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.