Index   ವಚನ - 103    Search  
 
ಅಂಗ ಹಲವರ ಮೇಲೆ ನಿಂದಾತನ ಕಾಣುವ ಕಂಗಳು ಒಂದೇ ನೋಡಾ. ಆ ಕಾಣುವ ಕಂಗಳು ತನ್ನ ಕಣ್ಣೋ, ಬೇರೊಂದು ಬಿನ್ನಾಣದ ಕಣ್ಣೋ ಎಂಬ ಬೆಡಗನರಿದು, ತನ್ನ ಕಣ್ಣ ಕಳದು ಬಿನ್ನಾಣದ ಕಣ್ಣನಳಿಯಲು ತನ್ನ ಮುನ್ನಿನ ಕಣ್ಣು ಕಾಣಬಂದಿತ್ತು ನೋಡಾ. ಅದು ನಿನ್ನ ಕಣ್ಣೆಂದರಿದ ಮಾತ್ರದಲ್ಲಿ ಎನ್ನ ನುಂಗಿತ್ತು. ನಿನ್ನಲ್ಲಿ ಅಡಗತ್ತು; ಅದು ಅಡಗಿದ ಠಾವಿನಲ್ಲಿ ನಾನಡಗಿ ನಿರ್ವಯಲಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.